ನ್ಯೂಜಿಲೆಂಡ್ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಶತಕ ಗಳಿಸಿ ಮಿಂಚಿದ ಹನುಮ ವಿಹಾರಿ

ಹ್ಯಾಮಿಲ್ಟನ್| Krishnaveni K| Last Modified ಶುಕ್ರವಾರ, 14 ಫೆಬ್ರವರಿ 2020 (10:09 IST)
ಹ್ಯಾಮಿಲ್ಟನ್: ಭಾರತ ಮತ್ತು ನ್ಯೂಜಿಲೆಂಡ್ ಇಲೆವೆನ್ ನಡುವಿನ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ಮಧ‍್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಹನುಮ ವಿಹಾರಿ ಭರ್ಜರಿ ಶತಕ ಗಳಿಸಿದ್ದಾರೆ.
 

ಮೊದಲ ದಿನವಾದ ಇಂದು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತ ಇತ್ತೀಚೆಗಿನ ವರದಿ ಬಂದಾಗ 5 ವಿಕೆಟ್ ನಷ್ಟಕ್ಕೆ 244 ರನ್ ಗಳಿಸಿದೆ. ಭಾರತದ ಪರ ಹನುಮ ವಿಹಾರಿ ಅಜೇಯ 101 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದರೆ, ಇವರಿಗೆ ತಕ್ಕ ಜತೆಯಾಟ ನೀಡಿದ ಚೇತೇಶ್ವರ ಪೂಜಾರ 93 ರನ್ ಗೆ ಔಟಾಗಿ ಶತಕ ವಂಚಿತರಾದರು.
 
ಇನ್ನು ಆರಂಭಿಕ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿರುವ ಪೃಥ್ವಿ ಶಾ ಮತ್ತು ಶಬ್ನಂ ಗಿಲ್ ಇಬ್ಬರೂ ಶೂನ್ಯ ಸುತ್ತಿದರು. ಮಯಾಂಕ್ ಅಗರ್ವಾಲ್ ಕೇವಲ 1 ರನ್ ಗಳಿಸಿ ಔಟಾದರು. ಅಜಿಂಕ್ಯಾ ರೆಹಾನೆ 18 ರನ್ ಗಳಿಸಿದರು.
ಇದರಲ್ಲಿ ಇನ್ನಷ್ಟು ಓದಿ :