ಭಾರತ-ನ್ಯೂಜಿಲೆಂಡ್ ಟೆಸ್ಟ್: ಪೂಜಾರ-ಗಿಲ್ ಎಚ್ಚರಿಕೆಯ ಆಟ

ಕಾನ್ಪುರ| Krishnaveni K| Last Modified ಗುರುವಾರ, 25 ನವೆಂಬರ್ 2021 (10:47 IST)
ಕಾನ್ಪುರ: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ಅವಧಿಯಲ್ಲಿ ಭಾರತ ಎಚ್ಚರಿಕೆಯ ಆಟಕ್ಕೆ ಕೈ ಹಾಕಿದೆ. ಇತ್ತೀಚೆಗಿನ ವರದಿ ಬಂದಾಗ 1 ವಿಕೆಟ್ ನಷ್ಟಕ್ಕೆ 43 ರನ್ ಗಳಿಸಿದೆ.

ಇದೀಗ ಚೇತೇಶ್ವರ ಪೂಜಾರ 5, ಶುಬ್ನಂ ಗಿಲ್ 23 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇದಕ್ಕೂ ಮೊದಲು ಮಯಾಂಕ್ ಅಗರ್ವಾಲ್ 13 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು.


ಇದಾದ ಬಳಿಕ ಗಿಲ್-ಪೂಜಾರ ಜೋಡಿ ಎಚ್ಚರಿಕೆಯಿಂದ ಇನಿಂಗ್ಸ್ ಕಟ್ಟುವ ಕೆಲಸಕ್ಕೆ ಮುಂದಾಗಿದೆ. ಮೊದಲ ಅವಧಿಯಲ್ಲಿ ಕಿವೀಸ್ ಮೇಲುಗೈ
ಸಾಧಿಸಿದರೂ ಬಳಿಕ ಹೆಚ್ಚಿನ ಅಪಾಯವಾಗದಂತೆ ಈ ಜೋಡಿ ನೋಡಿಕೊಂಡಿದೆ.


ಇದರಲ್ಲಿ ಇನ್ನಷ್ಟು ಓದಿ :