ದುಬೈ: ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಎಂದರೆ ಯಾವುದೇ ಫಾರ್ಮ್ಯಾಟ್, ಟೂರ್ನಿಯಿರಲಿ ಫೈನಲ್ ಗಿಂತಲೂ ಹೆಚ್ಚು ಮಹತ್ವವಿರುತ್ತದೆ. ಪ್ರೇಕ್ಷಕರೂ ಇದೊಂದು ಯುದ್ಧವೇನೋ ಎಂಬಂತೆ ಎದಿರು ನೋಡುತ್ತಾರೆ. ಅಂತಹದ್ದೇ ಒಂದು ಪಂದ್ಯಕ್ಕೆ ಇಂದು ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ಸಾಕ್ಷಿಯಾಗಲಿದೆ.ಇಂದು ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ-ಪಾಕಿಸ್ತಾನ ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ಟಿ20 ಫಾರ್ಮ್ಯಾಟ್ ನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಎರಡೂ ತಂಡಗಳೂ ಬಲಿಷ್ಠವೇ. ಕಳೆದ ಬಾರಿ ಟಿ20 ವಿಶ್ವಕಪ್ ನಲ್ಲಿ