ಭಾರತ-ಪಾಕಿಸ್ತಾನ ಪಂದ್ಯಕ್ಕೆ ಮುಹೂರ್ತ ಫಿಕ್ಸ್

ದುಬೈ| Krishnaveni K| Last Modified ಶನಿವಾರ, 17 ಜುಲೈ 2021 (08:50 IST)
ದುಬೈ: ಐಸಿಸಿ 2021 ಟಿ20 ವಿಶ್ವಕಪ್ ಪಂದ್ಯದ ವೇಳಾಪಟ್ಟಿ ಪ್ರಕಟವಾಗಿದ್ದು, ಗ್ರೂಪ್ ಹಂತದಲ್ಲೇ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಸೆಣಸಾಡಲಿವೆ.

 
ಅಕ್ಟೋಬರ್ 17 ರಿಂದ ನವಂಬರ್ 14 ರವರೆಗೆ ಒಮನ್ ಮತ್ತು ಯುಎಇನಲ್ಲಿ ಟೂರ್ನಮೆಂಟ್ ನಡೆಯಲಿದೆ. ಅರ್ಹತಾ ಸುತ್ತಿನ ಬಳಿಕ ಮುಖ್ಯ ಸುತ್ತಿನ ಲೀಗ್ ಪಂದ್ಯಗಳು ನಡೆಯಲಿವೆ.
 
ಎಲ್ಲಕ್ಕಿಂತ ವಿಶೇಷವಾಗಿ ಗಮನ ಸೆಳೆಯುತ್ತಿರುವುದು ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ. ಅಕ್ಟೋಬರ್ 24 ರಂದು ಬದ್ಧವೈರಿಗಳ ನಡುವೆ ಲೀಗ್ ಪಂದ್ಯ ನಡೆಯಲಿದೆ. ಎರಡೂ ತಂಡಗಳು ಬಿ ಗುಂಪಿನಲ್ಲಿ ಸ್ಥಾನ ಪಡೆದಿರುವುದರಿಂದ ಲೀಗ್ ಹಂತದಲ್ಲೇ ಮುಖಾಮುಖಿಯಾಗಲಿದೆ. 2019 ರ ಏಕದಿನ ವಿಶ್ವಕಪ್ ಬಳಿಕ ಇದೇ ಮೊದಲ ಬಾರಿಗೆ ಎರಡೂ ತಂಡಗಳು ಮುಖಾಮುಖಿಯಾಗುತ್ತಿದೆ.
ಇದರಲ್ಲಿ ಇನ್ನಷ್ಟು ಓದಿ :