ದುಬೈ: ಏಷ್ಯಾ ಕಪ್ ಕ್ರಿಕೆಟ್ ನ ಕೊನೆಯ ಲೀಗ್ ಪಂದ್ಯದಲ್ಲಿ ಪಾಕಿಸ್ತಾನ ಗೆಲುವು ಸಾಧಿಸುವುದರೊಂದಿಗೆ ಈ ಭಾನುವಾರ ಮತ್ತೊಮ್ಮೆ ಭಾರತ-ಪಾಕಿಸ್ತಾನ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ.ಸೂಪರ್ ಫೋರ್ ಹಂತಕ್ಕೇರಿರುವ ಭಾರತಕ್ಕೆ ಮೊದಲ ಪಂದ್ಯ ಭಾನುವಾರ ಎ ಗುಂಪಿನ ಎರಡನೇ ಸ್ಥಾನಿಯಾದ ಪಾಕಿಸ್ತಾನದ ಜೊತೆಗಿರಲಿದೆ. ಒಂದು ವೇಳೆ ಹಾಂಗ್ ಕಾಂಗ್ ಗೆದ್ದಿದ್ದರೆ ಭಾನುವಾರ ಹಾಂಗ್ ಕಾಂಗ್ ಜೊತೆ ಆಡಬೇಕಿತ್ತು.ಇದರೊಂದಿಗೆ ಸಾಂಪ್ರದಾಯಿಕ ಎದುರಾಳಿಗಳ ರೋಚಕ ಪಂದ್ಯವನ್ನು ಮತ್ತೆ ಈ ಭಾನುವಾರವೂ ಸವಿಯುವ ಯೋಗ ಪ್ರೇಕ್ಷಕರಿಗೆ.