ಪೊಚೆಫ್ ಸ್ಟ್ರೂಮ್: ಅಂಡರ್ 19 ವಿಶ್ವಕಪ್ ಕೂಟದ ಸೆಮಿಫೈನಲ್ ಗೇರಿರುವ ಭಾರತ ತಂಡ ಇಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಸೆಣಸಾಡಲಿದೆ.ಹಾಲಿ ಚಾಂಪಿಯನ್ ಭಾರತಕ್ಕೆ ಇದು ಕಠಿಣ ಸವಾಲಾಗಲಿದೆ. ಮೇಲ್ನೋಟಕ್ಕೆ ಪ್ರಿಯಂ ಗಾರ್ಗ್ ನೇತೃತ್ವದ ಭಾರತ ತಂಡವೇ ಹೆಚ್ಚು ಬಲಿಷ್ಠವಾಗಿದೆ. ಹಾಗಿದ್ದರೂ ಇದುವರೆಗೆ ಅಂಡರ್ 19 ವಿಶ್ವಕಪ್ ಕೂಟದಲ್ಲಿ ಎರಡೂ ತಂಡಗಳು ಮುಖಾಮುಖಿಯಾದ ಸಂದರ್ಭದಲ್ಲಿ ಪಾಕಿಸ್ತಾನ ಒಟ್ಟು ಐದು ಬಾರಿ ಗೆಲುವು ಕಂಡಿದೆ.ಆದರೆ ಎರಡು ವರ್ಷಗಳ ಹಿಂದೆ ಇದೇ ರೀತಿ