ಲಂಡನ್: ಭಾರತ ಮತ್ತು ಪಾಕಿಸ್ತಾನದ ನಡುವೆ ಇಂದು ವಿಶ್ವಕಪ್ ಪಂದ್ಯ ನಡೆಯಲಿದ್ದು, ಪ್ರಮುಖ ಆಟಗಾರರ ನಡುವಿನ ಜುಗಲ್ ಬಂದಿಯಾಗುವ ಲಕ್ಷಣ ತೋರುತ್ತಿದೆ.ಭಾರತ ಮತ್ತು ಪಾಕಿಸ್ತಾನ ತಂಡಗಳ ಆಟಗಾರರಿಗೆ ಕೆಲವೊಂದು ಆಟಗಾರರೇ ಟಾರ್ಗೆಟ್ ಆಗಿರುತ್ತಾರೆ. ಅದರಲ್ಲೂ ವಿಶೇಷವಾಗಿ ವಿರಾಟ್ ಕೊಹ್ಲಿ-ಮೊಹಮ್ಮದ್ ಅಮೀರ್, ರೋಹಿತ್ ಶರ್ಮಾ-ವಹಾಬ್ ರಿಯಾಜ್, ಜಸ್ಪ್ರೀತ್ ಬುಮ್ರಾ-ಫಖರ್ ಜಮಾನ್ ಪರಸ್ಪರರನ್ನು ಟಾರ್ಗೆಟ್ ಮಾಡಿಯೇ ಕದನ ಕಣಕ್ಕಿಳಿಯುತ್ತಾರೆ.ಹೀಗಾಗಿ ಈ ಆಟಗಾರರ ನಡುವಿನ ಕಾಳಗ ನೋಡಲು ಕುತೂಹಲಕಾರಿಯಾಗಿರುತ್ತದೆ. ಈಗಾಗಲೇ ಕ್ರಿಕೆಟ್ ದಿಗ್ಗಜ ಸಚಿನ್