ದುಬೈ: ಕಳೆದ ವಾರವಷ್ಟೇ ಭಾರತ-ಪಾಕಿಸ್ತಾನ ನಡುವಿನ ರೋಚಕ ಪಂದ್ಯದ ಸವಿ ಸವಿದ ಅಭಿಮಾನಿಗಳಿಗೆ ಮತ್ತೆ ಈ ವಾರವೂ ಅದೇ ರೋಚಕ ಪಂದ್ಯಕ್ಕೆ ಸಾಕ್ಷಿಯಾಗುವ ಯೋಗ ಬಂದಿದೆ.ಏಷ್ಯಾ ಕಪ್ ಕ್ರಿಕೆಟ್ ನಲ್ಲಿ ಇಂದಿನಿಂದ ಸೂಪರ್ ಫೋರ್ ಹಂತದ ಪಂದ್ಯಗಳು ನಡೆಯಲಿದ್ದು, ಮೊದಲ ಪಂದ್ಯದಲ್ಲಿ ಎ ಗುಂಪಿನ ಅಗ್ರ ತಂಡವಾದ ಟೀಂ ಇಂಡಿಯಾ ಎರಡನೇ ತಂಡವಾದ ಪಾಕಿಸ್ತಾನವನ್ನು ಎದುರಿಸಲಿದೆ.ಕಳೆದ ಭಾನುವಾರ ನಡೆದಿದ್ದ ಲೀಗ್ ಪಂದ್ಯದಲ್ಲಿ ಟೀಂ ಇಂಡಿಯಾ ಹಾರ್ದಿಕ್ ಪಾಂಡ್ಯ ಸಾಹಸದಿಂದ ಗೆದ್ದಿತ್ತು.