ಭಾರತ-ದ.ಆಫ್ರಿಕಾಕ್ಕೆ ಈಗ ಟಾರ್ಗೆಟ್ 111

ಕೇಪ್ ಟೌನ್| Krishnaveni K| Last Modified ಶುಕ್ರವಾರ, 14 ಜನವರಿ 2022 (08:33 IST)
ಕೇಪ್ ಟೌನ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಮೂರನೇ ಟೆಸ್ಟ್ ಪಂದ್ಯ ಇಂದು ನಾಲ್ಕನೇ ದಿನ ಕುತೂಹಲಕಾರಿ ಘಟ್ಟದಲ್ಲಿದೆ. ಉಭಯ ತಂಡಗಳು ಈಗ 111 ರನ್ ಗಳ ಟಾರ್ಗೆಟ್ ಮೇಲೆ ದೃ಼ಷ್ಟಿ ನೆಟ್ಟಿದೆ.

ದ್ವಿತೀಯ ಇನಿಂಗ್ಸ್ ನಲ್ಲಿ ಟೀಂ ಇಂಡಿಯಾ 198 ರನ್ ಗಳಿಗೆ ಆಲೌಟ್ ಆಗಿದ್ದರಿಂದ ಆಫ್ರಿಕಾಗೆ ಗೆಲ್ಲಲು 212 ರನ್ ಗಳ ಸುಲಭ ಗುರಿ ಸಿಕ್ಕಿದೆ. ನಿನ್ನೆಯ ದಿನದಂತ್ಯಕ್ಕೆ ಆಫ್ರಿಕಾ 2 ವಿಕೆಟ್ ನಷ್ಟಕ್ಕೆ 101 ರನ್ ಗಳಿಸಿದೆ.


ಆದರೆ ಮೊದಲ ಇನಿಂಗ್ಸ್ ನಂತೆ ಇಂದು ಟೀಂ ಇಂಡಿಯಾ ಬೌಲರ್ ಗಳು ಎದುರಾಳಿಗಳ ದಿಡೀರ್ ಕುಸಿತಕ್ಕೆ ಕಾರಣವಾದರೆ ಭಾರತಕ್ಕೂ ಪಂದ್ಯ ಗೆಲ್ಲುವ ಅವಕಾಶವಿದೆ. ಸದ್ಯಕ್ಕೆ ಕೀಗನ್ ಪೀಟರ್ಸನ್ 48 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ಇನ್ನು ಅಂಪಾಯರ್ ಕೃಪೆಯಿಂದ ಬಚಾವ್ ಆಗಿದ್ದ ಡೀನ್ ಎಲ್ಗರ್ 30 ರನ್ ಗಳಿಗೆ ವಿಕೆಟ್ ಒಪ್ಪಿಸಿದ್ದಾರೆ. ಹೀಗಾಗಿ ಇಂದಿನ ದಿನ ಎರಡೂ ತಂಡಗಳ ಮೇಲೆ ಗೆಲ್ಲುವ ಒತ್ತಡವಿದೆ.


ಇದರಲ್ಲಿ ಇನ್ನಷ್ಟು ಓದಿ :