ಓವಲ್: ಭಾರತ ಮತ್ತು ದ.ಆಫ್ರಿಕಾ ನಡುವೆ ಇಂದು ಮೂರು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯ ಸೈಂಟ್ ಜಾರ್ಜ್ ಓವಲ್ ಮೈದಾನದಲ್ಲಿ ನಡೆಯಲಿದೆ. ಮೊದಲ ಪಂದ್ಯ ಮಳೆಗೆ ಆಹುತಿಯಾಗಿತ್ತು. ಟಾಸ್ ಕೂಡಾ ನಡೆಯದೇ ಪಂದ್ಯ ರದ್ದು ಮಾಡಬೇಕಾಗಿ ಬಂದಿತ್ತು. ಟೀಂ ಇಂಡಿಯಾ ಇಲ್ಲಿಗೆ ಕಾಲಿಟ್ಟಾಗಲೇ ಮಳೆಯ ಸ್ವಾಗತ ಸಿಕ್ಕಿತ್ತು. ಇದೀಗ ಎರಡನೇ ಪಂದ್ಯಕ್ಕೂ ಮಳೆಯ ಭೀತಿಯಿದೆ.ಸೂರ್ಯಕುಮಾರ್ ಯಾದವ್ ನೇತೃತ್ವದ ಯುವ ಪಡೆಗೆ ಇದು ಮೊದಲ ವಿದೇಶೀ ಸರಣಿ. ಆಸ್ಟ್ರೇಲಿಯಾ