Widgets Magazine

ಭಾರತ-ದ.ಆಫ್ರಿಕಾ ಮೊದಲ ಟೆಸ್ಟ್ ಇಂದು: ರೋಹಿತ್ ಶರ್ಮಾ ಮೇಲೆ ಒತ್ತಡ

ವಿಶಾಖಪಟ್ಟಣಂ| Krishnaveni K| Last Modified ಬುಧವಾರ, 2 ಅಕ್ಟೋಬರ್ 2019 (07:35 IST)
ವಿಶಾಖಪಟ್ಟಣಂ: ಭಾರತ ಮತ್ತು ದ.ಆಫ್ರಿಕಾ ನಡುವೆ ಇಂದು ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ತವರಿನ ಬಲದಲ್ಲಿ ಸರಣಿ ಗೆಲ್ಲುವ ಉತ್ಸಾಹದಲ್ಲಿ ಟೀಂ ಇಂಡಿಯಾವಿದೆ.

 
ಈ ಪಂದ್ಯದಲ್ಲಿ ಕೆಎಲ್ ರಾಹುಲ್ ಬದಲಾಗಿ ಆರಂಭಿಕರಾಗಿ ಕಣಕ್ಕಿಳಿಯುತ್ತಿರುವ ರೋಹಿತ್ ಶರ್ಮಾಗೆ ಈಗ ಟೆಸ್ಟ್ ನಲ್ಲಿ ಸ್ಥಾನ ಉಳಿಸಿಕೊಳ್ಳಲು ಉತ್ತಮ ಪ್ರದರ್ಶನ ತೋರುವ ಒತ್ತಡವಿರಲಿದೆ. ಅತ್ತ ಕೆಎಲ್ ರಾಹುಲ್ ದೇಶೀಯ ಕ್ರಿಕೆಟ್ ನಲ್ಲಿ ಉತ್ತಮ ಪ್ರದರ್ಶನ ನೀಡಿರುವುದು ರೋಹಿತ್ ಮೇಲೆ ಒತ್ತಡ ಹೆಚ್ಚಿಸಿದೆ.
 
ಇನ್ನೊಂದೆಡೆ ವಿಕೆಟ್ ಕೀಪರ್ ರಿಷಬ್ ಪಂತ್ ಬದಲಿಗೆ ಬಹಳ ದಿನಗಳ ನಂತರ ವೃದ್ಧಿಮಾನ್ ಸಹಾ ಸ್ಥಾನ ಪಡೆದಿದ್ದಾರೆ. ಹೀಗಾಗಿ ಟೆಸ್ಟ್ ತಂಡದಲ್ಲಿ ಮತ್ತೆ ಸ್ಥಾನ ಗಟ್ಟಿಮಾಡಲು ಸಹಾಗೆ ಇದು ಉತ್ತಮ  ಅವಕಾಶವಾಗಲಿದೆ.  ಪಂದ್ಯ ಭಾರತೀಯ ಕಾಲಮಾನ ಪ್ರಕಾರ ಬೆಳಿಗ್ಗೆ 9.30 ಕ್ಕೆ ಆರಂಭವಾಗಲಿದೆ.
ಇದರಲ್ಲಿ ಇನ್ನಷ್ಟು ಓದಿ :