Widgets Magazine

ಧೋನಿ ತವರಲ್ಲಿ ಟೀಂ ಇಂಡಿಯಾ: ಟಿಕೆಟ್ ಸೋಲ್ಡ್ ಔಟ್

ರಾಂಚಿ| Krishnaveni K| Last Modified ಗುರುವಾರ, 17 ಅಕ್ಟೋಬರ್ 2019 (11:27 IST)
ರಾಂಚಿ: ಭಾರತ ಮತ್ತು ದ.ಆಫ್ರಿಕಾ ನಡುವೆ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ರಾಂಚಿಯಲ್ಲಿ ಅಕ್ಟೋಬರ್ 19 ರಿಂದ ಆರಂಭವಾಗಲಿದೆ. ಈ ಪಂದ್ಯಕ್ಕಾಗಿ ಉಭಯ ತಂಡಗಳು ರಾಂಚಿಗೆ ಬಂದಿಳಿದಿವೆ.

 
ನಿನ್ನೆಯೇ ರಾಂಚಿಗೆ ಬಂದಿಳಿದಿರುವ ಟೀಂ ಇಂಡಿಯಾ ಮತ್ತು ದ.ಆಫ್ರಿಕಾ ಕ್ರಿಕೆಟಿಗರಿಗೆ ಅಭಿಮಾನಿಗಳಿಂದ ಭರ್ಜರಿ ಸ್ವಾಗತ ಸಿಕ್ಕಿದೆ. ತವರಿನ ಹುಡುಗ ಧೋನಿ ಇಲ್ಲದೇ ಪಂದ್ಯವಾಡುತ್ತಿದ್ದರೂ ಅಭಿಮಾನಿಗಳಿಗೆ ಪಂದ್ಯದ ಮೇಲಿನ ಕ್ರೇಜ್ ಕಡಿಮೆಯಾಗಿಲ್ಲ.
 
ಮಂಗಳವಾರದಿಂದಲೇ ಟಿಕೆಟ್ ಮಾರಾಟ ಆರಂಭವಾಗಿದ್ದು, ಈಗಾಗಲೇ ಹೆಚ್ಚು ಕಡಿಮೆ ಎಲ್ಲವೂ ಮಾರಾಟವಾಗಿದೆ. ಈ ಟೆಸ್ಟ್ ಪಂದ್ಯದ ವೇಳೆ ಧೋನಿ ಮೈದಾನದಲ್ಲಿ ಉಪಸ್ಥಿತರಿರಲಿದ್ದಾರೆ ಎನ್ನಲಾಗಿದೆ.
ಇದರಲ್ಲಿ ಇನ್ನಷ್ಟು ಓದಿ :