ಸೆಂಚೂರಿಯನ್: ಭಾರತ ಕ್ರಿಕೆಟ್ ತಂಡಕ್ಕೆ ಸದಾ ಮಳೆ ಶಾಪವಾಗಿಯೇ ಕಾಡುತ್ತದೆ. ಭಾರತ ಮತ್ತು ದ.ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ನಲ್ಲಿಯೂ ಅದೇ ನಡೆದಿದೆ.ಭಾರತ ಮತ್ತು ದ.ಆಫ್ರಿಕಾ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ನ ದ್ವಿತೀಯ ದಿನದ ಸಂಪೂರ್ಣ ಆಟ ಮಳೆಗೆ ಆಹುತಿಯಾಗಿದೆ. ನಿನ್ನೆಯ ದಿನದಂತ್ಯಕ್ಕೆ ಟೀಂ ಇಂಡಿಯಾ 3 ವಿಕೆಟ್ ಕಳೆದುಕೊಂಡು 272 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು.ಆರಂಭಿಕ ಕೆಎಲ್ ರಾಹುಲ್ 122, ಅಜಿಂಕ್ಯಾ ರೆಹಾನೆ 40 ರನ್ ಗಳಿಸಿ