ಬೆಂಗಳೂರು: ನಿನ್ನೆ ಸಂಜೆ ಮಳೆಯಿಂದಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಭಾರತ-ದ.ಆಫ್ರಿಕಾ ನಡುವಿನ ಐದನೇ ಟಿ20 ಪಂದ್ಯ ರದ್ದಾಗಿತ್ತು.ಭಾರತ ಮೊದಲು ಬ್ಯಾಟಿಂಗ್ ನಡೆಸಿ ಕೇವಲ 3.3 ಓವರ್ ಬ್ಯಾಟಿಂಗ್ ನಡೆಸಲಷ್ಟೇ ಶಕ್ತವಾಗಿತ್ತು. ಇದಾದ ಬಳಿಕ ಎಡೆಬಿಡದೇ ಸುರಿದ ಮಳೆಯಿಂದಾಗಿ ಆಟ ರದ್ದುಗೊಳಿಸಬೇಕಾಯಿತು. ಸರಣಿ 2-2 ರಿಂದ ಸಮಬಲವಾಯಿತು. ಇದು ಅಭಿಮಾನಿಗಳಿಗೆ ತೀವ್ರ ನಿರಾಸೆ ತಂದಿತ್ತು.ಈ ಸರಣಿಯಲ್ಲಿ ಮೊದಲ ಬಾರಿಗೆ ನಾಯಕರಾಗಿ ತಂಡವನ್ನು ಮುನ್ನಡೆಸಿದ ರಿಷಬ್ ಪಂತ್ ಬೇಡದ ದಾಖಲೆಯೊಂದನ್ನು ಮಾಡಿದರು. ನಿನ್ನೆಯ