ಮುಂಬೈ: ಶ್ರೀಲಂಕಾ ವಿರುದ್ಧ ಮುಂಬರುವ ಟೆಸ್ಟ್ ಸರಣಿಯ ಪೈಕಿ ಮೊದಲ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯ ವಿರಾಟ್ ಕೊಹ್ಲಿ ಪಾಲಿಗೆ 100 ನೇ ಟೆಸ್ಟ್ ಪಂದ್ಯ ಎನ್ನುವುದು ವಿಶೇಷವಾಗಿದೆ.ಇನ್ನೊಂದು ವಿಶೇಷವೆಂದರೆ ಈ ಪಂದ್ಯವನ್ನು ಹಗಲು-ರಾತ್ರಿಯಾಗಿ ನಡೆಸಲು ಬಿಸಿಸಿಐ ಈಗ ಚಿಂತನೆ ನಡೆಸುತ್ತಿದೆಯಂತೆ. ಮೊಹಾಲಿ ಮತ್ತು ಬೆಂಗಳೂರಿನಲ್ಲಿ ಎರಡು ಟೆಸ್ಟ್ ಪಂದ್ಯ ನಡೆಯಲಿದೆ.ಈ ಪೈಕಿ ಬೆಂಗಳೂರು ಪಂದ್ಯವನ್ನು ಹಗಲು-ರಾತ್ರಿಯಾಗಿ ಆಯೋಜಿಸುವುದು ಬಿಸಿಸಿಐ ಯೋಜನೆ. ಮೊಹಾಲಿಯಲ್ಲಿ ಇಬ್ಬನಿ ಕಾರಣದಿಂದ