ಜುಲೈನಲ್ಲಿ ಟೀಂ ಇಂಡಿಯಾ ಶ್ರೀಲಂಕಾ ಕ್ರಿಕೆಟ್ ಸರಣಿ

ಮುಂಬೈ| Krishnaveni K| Last Modified ಮಂಗಳವಾರ, 11 ಮೇ 2021 (09:09 IST)
ಮುಂಬೈ: ಮುಂಬರುವ ಜುಲೈ ತಿಂಗಳಲ್ಲಿ ಸೀಮಿತ ಓವರ್ ಗಳ ಸರಣಿ ಆಡಲು ಟೀಂ ಇಂಡಿಯಾ ಶ್ರೀಲಂಕಾ ಪ್ರವಾಸ ಮಾಡಲಿದೆ ಎಂದು ಅಧ‍್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ. ಆದರೆ ಇದಕ್ಕೊಂದು ಟ್ವಿಸ್ಟ್ ಇದೆ.

 
ಈ ಸರಣಿಯಲ್ಲಿ ಭಾರತ ತಂಡದ ಪ್ರಮುಖರಿಗೆ ವಿಶ್ರಾಂತಿ ನೀಡಲಾಗುತ್ತದೆ. ನಾಯಕ ವಿರಾಟ್ ಕೊಹ್ಲಿ, ಹಿಟ್ ಮ್ಯಾನ್ ರೋಹಿತ್ ಶರ್ಮಾ ಇತ್ಯಾದಿ ಪ್ರಮುಖ ಆಟಗಾರರಿಗೆ ಭವಿಷ್ಯದ ಪ್ರಮುಖ ಟೂರ್ನಿಗಳ ದೃಷ್ಟಿಯಿಂದ ವಿಶ್ರಾಂತಿ ನೀಡಲಾಗುತ್ತದೆ ಎಂದು ಗಂಗೂಲಿ ಹೇಳಿದ್ದಾರೆ.
 
ಹೀಗಾಗಿ ಕೆಎಲ್ ರಾಹುಲ್ ಗೆ ನಾಯಕತ್ವ ಸಿಗುವ ಸಾಧ‍್ಯತೆಯಿದೆ. ಜುಲೈನಲ್ಲಿ ಟಿ20 ಮತ್ತು ಏಕದಿನ ಪಂದ್ಯಗಳ ಸರಣಿಯನ್ನು ಭಾರತ ಲಂಕಾ ನೆಲದಲ್ಲಿ ಆಡಲಿದೆ.
ಇದರಲ್ಲಿ ಇನ್ನಷ್ಟು ಓದಿ :