ಭಾರತ-ಶ್ರೀಲಂಕಾ ಕ್ರಿಕೆಟ್ ಸರಣಿ ವೇಳಾಪಟ್ಟಿ ಹೀಗಿದೆ

ಮುಂಬೈ| Krishnaveni K| Last Modified ಮಂಗಳವಾರ, 8 ಜೂನ್ 2021 (09:57 IST)
ಮುಂಬೈ: ಒಂದೆಡೆ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ನಲ್ಲಿ ಟೆಸ್ಟ್ ಸರಣಿ ಆಡಲಿದ್ದರೆ, ಇತ್ತ ಶ್ರೀಲಂಕಾದಲ್ಲಿ ಇನ್ನೊಂದು ತಂಡ ಸೀಮಿತ ಓವರ್ ಗಳ ಸರಣಿ ಆಡಲಿದೆ.

 
ಇದೀಗ ಭಾರತ ಮತ್ತು ಶ್ರೀಲಂಕಾ ನಡುವೆ ಜುಲೈ 13 ರಿಂದ 25 ರವರೆಗೆ ನಡೆಯಲಿರುವ ಟಿ20 ಮತ್ತು ಏಕದಿನ ಸರಣಿಯ ವೇಳಾಪಟ್ಟಿ ಪ್ರಕಟವಾಗಿದೆ.
 
ಜೂನ್ 13, 16 ಮತ್ತು 18 ರಂದು ಏಕದಿನ ಸರಣಿ ಮತ್ತು ಜುಲೈ 21,23 ಮತ್ತು 25 ರಂದು ನಡೆಯಲಿದೆ. ಆದರೆ ಮೈದಾನಗಳು ಇನ್ನೂ ನಿರ್ಧಾರವಾಗಿಲ್ಲ. ಇನ್ನು, ಕೊಹ್ಲಿ ಅನುಪಸ್ಥಿತಿಯಲ್ಲಿ ಭಾರತದ ನಾಯಕತ್ವ ಯಾರ ಹೆಗಲಿಗೆ ಏರಲಿದೆ ಎಂಬ ಕುತೂಹಲವಿದೆ.
ಇದರಲ್ಲಿ ಇನ್ನಷ್ಟು ಓದಿ :