ಗುವಾಹಟಿ: ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟಿ20 ಪಂದ್ಯ ಮಳೆಯಿಂದಾಗಿ ಒಂದೂ ಎಸೆತ ಕಾಣದೇ ರದ್ದಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಮಳೆಯ ನಂತರ ಮೈದಾನ ನಿಭಾಯಿಸಲು ಸೂಕ್ತ ವ್ಯವಸ್ಥೆಯಿಲ್ಲದೇ ಸಿಬ್ಬಂದಿ ಹೆಣಗಾಡಿದ ಪರಿಸ್ಥಿತಿ ಎದುರಾಯಿತು.ಪಂದ್ಯಾರಂಭಕ್ಕೂ ಕೆಲವೇ ಕ್ಷಣಗಳ ಮೊದಲು ತುಂತುರು ಮಳೆ ಆರಂಭವಾಯಿತು. ಹಾಗಿದ್ದರೂ ಮಳೆ ನಿಂತು ಪಂದ್ಯ ನಡೆಯುತ್ತದೆ ಎಂಬ ಆಶಾಭಾವನೆ ಅಭಿಮಾನಿಗಳಲ್ಲಿತ್ತು. ಈ ನಡುವೆ ಟಾಸ್ ನಡೆದು ಭಾರತ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡಿತ್ತು.ಆದರೆ ಇನ್ನೇನು