ಧರ್ಮಶಾಲ: ಇಲ್ಲಿನ ಸುಂದರ ತಾಣದಲ್ಲಿ ಇಂದಿನಿಂದ ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ಏಕದಿನ ಸರಣಿ ಆಡಲು ಸಜ್ಜಾಗಿದೆ. ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯಕ್ಕೆ ಇಂದು ಚಾಲನೆ ಸಿಗಲಿದೆ. ಖಾಯಂ ನಾಯಕ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮಾ ತಂಡದ ನಾಯಕತ್ವ ವಹಿಸುತ್ತಿದ್ದಾರೆ. ಆದರೆ ಟೀಂ ಇಂಡಿಯಾಕ್ಕೆ ಏಕದಿನ ರ್ಯಾಂಕಿಂಗ್ ನಲ್ಲಿ ನಂ.1 ಆಗಲು ಇನ್ನೊಂದು ಅಂಕದ ಅಗತ್ಯವಿದ್ದು, ಈ ಸರಣಿ ಗೆದ್ದು ಆ ದಾಖಲೆ ಮಾಡುವ ಉತ್ಸಾಹದಲ್ಲಿದೆ.ಕೊಹ್ಲಿ