ಭಾರತ-ಶ್ರೀಲಂಕಾ ದ್ವಿತೀಯ ಟಿ20 ಇಂದು

ಕೊಲೊಂಬೋ| Krishnaveni K| Last Modified ಮಂಗಳವಾರ, 27 ಜುಲೈ 2021 (08:50 IST)
ಕೊಲೊಂಬೋ: ಭಾರತ ಮತ್ತು ಶ್ರೀಲಂಕಾ ನಡುವಿನ ದ್ವಿತೀಯ ಟಿ20 ಪಂದ್ಯ ಇಂದು ನಡೆಯಲಿದೆ. ಈಗಾಗಲೇ ಮೊದಲ ಪಂದ್ಯ ಗೆದ್ದಿರುವ ಭಾರತ ಇಂದಿನ ಪಂದ್ಯ ಗೆದ್ದರೆ ಸರಣಿ ಕೈವಶವಾಗಲಿದೆ.

 
ಏಕದಿನ ಸರಣಿ ಬಳಿಕ ಇದೀಗ ಟಿ20 ಸರಣಿಯನ್ನೂ ತನ್ನದಾಗಿಸುವ ಉತ್ಸಾಹದಲ್ಲಿ ಭಾರತವಿದೆ. ಕಳೆದ ಪಂದ್ಯದಲ್ಲಿ ಪೃಥ‍್ವಿ ಶಾ ಮತ್ತು ಹಾರ್ದಿಕ್ ಪಾಂಡ್ಯ ಬಿಟ್ಟರೆ ಉಳಿದೆಲ್ಲರೂ ಉತ್ತಮ ಪ್ರದರ್ಶನ ತೋರಿದ್ದರು. ಹೀಗಾಗಿ ಈ ಪಂದ್ಯದಲ್ಲಿ ಇಬ್ಬರಿಗೆ ಕೊಕ್ ನೀಡುತ್ತಾರಾ ಕಾದು ನೋಡಬೇಕು.
 
ದೇವದತ್ತ್ ಪಡಿಕ್ಕಲ್ ಮತ್ತು ಋತುರಾಜ್ ಗಾಯಕ್ ವಾಡ್ ಅವಕಾಶಕ್ಕಾಗಿ ಕಾಯುತ್ತಿದ್ದು, ಇವರು ಅವಕಾಶ ಪಡೆದರೂ ಅಚ್ಚರಿಯಿಲ್ಲ. ಸ್ವತಃ ಶಿಖರ್ ಧವನ್ ಕಳೆದ ಪಂದ್ಯ ಗೆದ್ದರೂ ತಾವು ಇನ್ನೂ ಹೆಚ್ಚು ರನ್ ನಿರೀಕ್ಷಿಸಿದ್ದಾಗಿ ಹೇಳಿದ್ದರು. ಹೀಗಾಗಿ ಈ ಪಂದ್ಯಕ್ಕೆ ಬ್ಯಾಟಿಂಗ್ ವಿಭಾಗದಲ್ಲಿ ಬದಲಾವಣೆಯಾಗಬಹುದು. ಇಂದಿನ ಪಂದ್ಯ ರಾತ್ರಿ 8.00 ಗಂಟೆಗೆ ಪ್ರಾರಂಭವಾಗಲಿದೆ.
ಇದರಲ್ಲಿ ಇನ್ನಷ್ಟು ಓದಿ :