ಬೆಂಗಳೂರು: ಭಾರತ ಮತ್ತು ಶ್ರೀಲಂಕಾ ನಡುವೆ ಇಂದಿನಿಂದ ಚಿನ್ನಸ್ವಾಮಿ ಅಂಗಣದಲ್ಲಿ ಹಗಲು ರಾತ್ರಿ ಟೆಸ್ಟ್ ಆರಂಭವಾಗಲಿದೆ.ಚಿನ್ನಸ್ವಾಮಿ ಅಂಗಣದಲ್ಲಿ ನಡೆಯುತ್ತಿರುವ ಮೊದಲ ಹಗಲು ರಾತ್ರಿ ಟೆಸ್ಟ್ ಪಂದ್ಯವಾಗಿದೆ. ಅಲ್ಲದೆ, ರೋಹಿತ್ ನಾಯಕರಾಗಿ ಮೊದಲ ಬಾರಿಗೆ ಹೊನಲು ಬೆಳಕಿನಲ್ಲಿ ಟೆಸ್ಟ್ ತಂಡದ ಸಾರಥ್ಯ ವಹಿಸುತ್ತಿದ್ದಾರೆ.ಈ ಪಂದ್ಯದಲ್ಲಿ ಜಯಂತ್ ಯಾದವ್ ಬದಲಿಗೆ ಭಾರತ ತಂಡಕ್ಕೆ ಅಕ್ಸರ್ ಪಟೇಲ್ ಪುನರಾಗಮನವಾಗಲಿದೆ. ಇದರ ಹೊರತಾಗಿ ಹೆಚ್ಚಿನ ಬದಲಾವಣೆ ಸಾಧ್ಯತೆಯಿಲ್ಲ.