ಲಕ್ನೋ: ಭಾರತ ಮತ್ತು ಶ್ರೀಲಂಕಾ ನಡುವಿನ ಟಿ20 ಸರಣಿ ಇಂದಿನಿಂದ ಆರಂಭವಾಗಲಿದೆ. ಈಗಷ್ಟೇ ವಿಂಡೀಸ್ ವಿರುದ್ಧ ದಿಗ್ವಿಜಯ ಸಾಧಿಸಿರುವ ಟೀಂ ಇಂಡಿಯಾಗೆ ಈಗ ಮತ್ತೊಂದು ಸುಲಭ ಎದುರಾಳಿಯ ಮೇಲೆ ಸವಾರಿ ಮಾಡುವ ಅವಕಾಶ.ಆದರೆ ಈ ಸರಣಿಯಲ್ಲಿ ಪ್ರಮುಖ ಆಟಗಾರರ ಅನುಪಸ್ಥಿತಿ ಟೀಂ ಇಂಡಿಯಾಗೆ ಕಾಡಲಿದೆ. ನಾಯಕ ರೋಹಿತ್ ಶರ್ಮಾ ಬಿಟ್ಟರೆ ಬ್ಯಾಟಿಂಗ್ ನಲ್ಲಿ ಯುವ ಆಟಗಾರರದ್ದೇ ಪಾರುಪತ್ಯ.ಬೌಲಿಂಗ್ ನಲ್ಲಿ ಜಸ್ಪ್ರೀತ್ ಬುಮ್ರಾ ತಂಡಕ್ಕೆ ಮರಳಿದ್ದು ಬೌಲಿಂಗ್ ಗೆ ಶಕ್ತಿ ತುಂಬಲಿದ್ದಾರೆ.