ಭಾರತ-ಶ್ರೀಲಂಕಾ ಮೊದಲ ಟಿ20 ಇಂದು: ವಿರಾಟ್ ಕೊಹ್ಲಿ ಮೇಲೆ ಹೆಚ್ಚಿನ ಭಾರ

ಗುವಾಹಟಿ| Krishnaveni K| Last Modified ಭಾನುವಾರ, 5 ಜನವರಿ 2020 (09:10 IST)
ಗುವಾಹಟಿ: ಭಾರತ ಮತ್ತು ಶ್ರೀಲಂಕಾ ನಡುವೆ ಇಂದಿನಿಂದ ಟಿ20 ಸರಣಿ ಆರಂಭವಾಗುತ್ತಿದ್ದು ಮೊದಲ ಪಂದ್ಯ ಅಸ್ಸಾಂನ ಗುವಾಹಟಿ ಮೈದಾನದಲ್ಲಿ ನಡೆಯುತ್ತಿದೆ.
 

ಈ ಸರಣಿಯಲ್ಲಿ ರೋಹಿತ್ ಶರ್ಮಾ ಗೈರಾಗಿರುವುದರಿಂದ ಆರಂಭಿಕರಾಗಿ ತಂಡಕ್ಕೆ ವಾಪಸ್ ಆಗಿರುವ ಶಿಖರ್ ಧವನ್ ಜತೆ ಕೆಎಲ್ ರಾಹುಲ್ ಅವಕಾಶ ಪಡೆಯಲಿದ್ದಾರೆ. ರೋಹಿತ್ ಅನುಪಸ್ಥಿತಿಯಲ್ಲಿ ರನ್ ಗಳಿಸುವ ಹೊಣೆಗಾರಿಕೆ ಕೊಹ್ಲಿ ಮೇಲೆ ಹೆಚ್ಚಾಗಲಿದೆ.
 
ಅತ್ತ ಶ್ರೀಲಂಕಾ ಟೀಂ ಇಂಡಿಯಾಗೆ ಹೋಲಿಸಿದರೆ ದುರ್ಬಲವೆನಿಸಿದರೂ ಟಿ20 ಕ್ರಿಕೆಟ್ ನಲ್ಲಿ ಯಾರು ಬೇಕಾದರೂ ಮೇಲುಗೈ ಸಾಧಿಸಬಹುದು ಎಂಬುದು ಹಲವು ಬಾರಿ ಸಾಬೀತಾಗಿದೆ. ಲಂಕಾಗೆ ನಾಯಕ ಲಸಿತ್ ಮಲಿಂಗ ಪ್ರಮುಖ ಟ್ರಂಪ್ ಕಾರ್ಡ್. ಇವರ ಬೌಲಿಂಗ್ ಮತ್ತು ಭಾರತದ ಬಲಾಢ್ಯ ಬ್ಯಾಟಿಂಗ್ ನಡುವೆ ಯಾರು ಮೇಲುಗೈ ಸಾಧಿಸುತ್ತಾರೆ ಎಂದು ನೋಡಬೇಕಿದೆ. ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದೆ.
ಇದರಲ್ಲಿ ಇನ್ನಷ್ಟು ಓದಿ :