ಮೊಹಾಲಿ: ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯ ಇಂದಿನಿಂದ ಮೊಹಾಲಿಯಲ್ಲಿ ಆರಂಭವಾಗಲಿದೆ.ಟೆಸ್ಟ್ ಚಾಂಪಿಯನ್ ಶಿಪ್ ನ ಭಾಗವಾಗಿರುವ ಕಾರಣ ಈ ಸರಣಿ ಭಾರತದ ಪಾಲಿಗೆ ಮಹತ್ವದ್ದಾಗಿದೆ. ಜೊತೆಗೆ ಕೊಹ್ಲಿಯ 100 ನೇ ಟೆಸ್ಟ್ ಕೂಡಾ ಆಗಿರುವುದರಿಂದ ಟೀಂ ಇಂಡಿಯಾಗೆ ಪ್ರತಿಷ್ಠೆಯ ಕಣವಾಗಿದೆ.ಟೀಂ ಇಂಡಿಯಾದಿಂದ ಚೇತೇಶ್ವರ ಪೂಜಾರ, ಅಜಿಂಕ್ಯಾ ರೆಹಾನೆ ಹೊರಬಿದ್ದಿದ್ದಾರೆ. ಇಬ್ಬರು ಟೆಸ್ಟ್ ಸ್ಪೆಷಲಿಸ್ಟ್ ಗಳ ಸ್ಥಾನಕ್ಕೆ ಹೊಸ ಆಟಗಾರರು ಮಧ್ಯಮ ಕ್ರಮಾಂಕಕ್ಕೆ ಬರಲಿದ್ದಾರೆ. ಈ ಸ್ಥಾನಕ್ಕೆ