Widgets Magazine

ಮಹಿಳಾ ಟಿ20 ವಿಶ್ವಕಪ್: ಭಾರತಕ್ಕೆ ಇಂಗ್ಲೆಂಡ್ ಎದುರಾಳಿ

ಪರ್ತ್| Krishnaveni K| Last Modified ಬುಧವಾರ, 4 ಮಾರ್ಚ್ 2020 (09:29 IST)
ಪರ್ತ್: ಮಹಿಳಾ ಟಿ20 ವಿಶ್ವಕಪ್ ನ ಸೆಮಿಫೈನಲ್ ನಲ್ಲಿ ಭಾರತದ ವನಿತೆಯರು ಇಂಗ್ಲೆಂಡ್ ತಂಡವನ್ನು ಎದುರಿಸಬೇಕಿದೆ. ಪ್ರಬಲ ತಂಡ ಇಂಗ್ಲೆಂಡ್ 2017 ರ ವಿಶ್ವಕಪ್ ಫೈನಲ್ ನಲ್ಲಿ ಭಾರತವನ್ನು ಮಣಿಸಿದ್ದು ಯಾರೂ ಮರೆಯುವಂತಿಲ್ಲ.

 
ಇದೀಗ ಮತ್ತೆ ನಿರ್ಣಾಯಕ ಪಂದ್ಯದಲ್ಲಿ ಇಂಗ್ಲೆಂಡ್ ಎದುರಾಳಿಯಾಗಿದೆ. ಅಂದೂ ಕೂಡಾ ಅದುವರೆಗೆ ಅಜೇಯವಾಗಿದ್ದ ಭಾರತ ಇಂಗ್ಲೆಂಡ್ ಎದುರು ಫೈನಲ್ ನ ಒತ್ತಡ ನಿಭಾಯಿಸಲಾಗದೇ ಸೋತು ನಿರಾಸೆ ಅನುಭವಿಸಿತ್ತು.
 
ಆದರೆ ಈ ಬಾರಿಯೂ ಹಾಗೇ ಆಗದಿರಲಿ ಎಂದೇ ಎಲ್ಲರ ಪ್ರಾರ್ಥನೆ. ಇನ್ನೊಂದು ಸೆಮಿಫೈನಲ್ ಪಂದ್ಯ ಕೂಡಾ ಅದೇ ದಿನ ಆಸ್ಟ್ರೇಲಿಯಾ ಮತ್ತು ದ.ಆಫ್ರಿಕಾ ನಡುವೆ ನಡೆಯಲಿದೆ.
ಇದರಲ್ಲಿ ಇನ್ನಷ್ಟು ಓದಿ :