Widgets Magazine

ಭಾರತ-ದ.ಆಫ್ರಿಕಾ ಟಿ20 ಮೊದಲ ಪಂದ್ಯ: ಎಲ್ಲಿ, ಯಾವಾಗ ವೀಕ್ಷಿಸಬೇಕು?

ಧರ್ಮಶಾಲಾ| Krishnaveni K| Last Modified ಭಾನುವಾರ, 15 ಸೆಪ್ಟಂಬರ್ 2019 (08:39 IST)
ಧರ್ಮಶಾಲಾ: ಭಾರತ ಮತ್ತು ದ.ಆಫ್ರಿಕಾ ನಡುವೆ ಇಂದಿನಿಂದ ಮೂರು ಪಂದ್ಯಗಳ ಟಿ20 ಸರಣಿ ಆರಂಭವಾಗಲಿದ್ದು, ಮೊದಲ ಪಂದ್ಯಕ್ಕೆ ಧರ್ಮಾಶಾಲಾ ಕ್ರೀಡಾಂಗಣ ಸಜ್ಜಾಗಿದೆ.

 
ಮೇಲ್ನೋಟಕ್ಕೆ ತವರಿನ ಬಲವೂ ಸೇರಿರುವುದರಿಂದ ಭಾರತ ಬಲಿಷ್ಠವಾಗಿದೆ. ರೋಹಿತ್ ಶರ್ಮಾ, ಶಿಖರ್ ಧವನ್ ಆರಂಭಿಕರಾಗಲಿದ್ದರೆ, ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಅಗ್ರ ಕ್ರಮಾಂಕದ ಬ್ಯಾಟಿಂಗ್ ಗೆ ಬಲ ತುಂಬಲಿದ್ದಾರೆ. ಬೌಲಿಂಗ್ ನಲ್ಲೂ ಭಾರತ ಬಲಿಷ್ಠವಾಗಿದೆ. ಇದುವರೆಗಿನ ದಾಖಲೆ ನೋಡಿದರೆ ಇಲ್ಲಿ ಬ್ಯಾಟಿಂಗ್ ಗೆ ಅನುಕೂಲಕರವಾದ ಪಿಚ್ ಇರುತ್ತದೆ. 200 ರನ್ ವರೆಗೂ ಯಶಸ್ವಿಯಾಗಿ ಚೇಸ್ ಮಾಡಿದ ಉದಾಹರಣೆಯಿದೆ. ಹೀಗಾಗಿ ಟಿ20 ಪಂದ್ಯಗಳ ಹೊಡೆಬಡಿಯ ಬ್ಯಾಟಿಂಗ್ ನಿರೀಕ್ಷಿಸಬಹುದಾಗಿದೆ.
 
ಪಂದ್ಯ ಭಾರತೀಯ ಕಾಲಮಾನ ಪ್ರಕಾರ ಸಂಜೆ 7 ಗಂಟೆಗೆ ಆರಂಭವಾಗಲಿದೆ. ಸ್ಟಾರ್ ಸ್ಪೋರ್ಟ್ಸ್ ನೆಟ್ ವರ್ಕ್ ವಾಹಿನಿಯಲ್ಲಿ ನೇರಪ್ರಸಾರ ವೀಕ್ಷಿಸಬಹುದಾಗಿದೆ.
ಇದರಲ್ಲಿ ಇನ್ನಷ್ಟು ಓದಿ :