ಕಟಕ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಇಂದು ಅಂತಿಮ ಮತ್ತು ನಿರ್ಣಾಯಕ ಏಕದಿನ ಪಂದ್ಯ ನಡೆಯಲಿದ್ದು, ಇಂದು ಗೆದ್ದವರು ಸರಣಿ ಕೈವಶ ಮಾಡಿಕೊಳ್ಳಲಿದ್ದಾರೆ.ದುರ್ಬಲವೆಂದೇ ಅಂದುಕೊಂಡಿದ್ದ ವೆಸ್ಟ್ ಇಂಡೀಸ್ ತಂಡ ಶೈ ಹೋಪ್ ಮತ್ತು ಶಿಮ್ರಾನ್ ಹೆಟ್ ಮ್ಯಾರ್ ಅಬ್ಬರದ ಬ್ಯಾಟಿಂಗ್ ಮತ್ತು ಅದ್ಭುತ ಫೀಲ್ಡಿಂಗ್ ನಿಂದಾಗಿ ಟೀಂ ಇಂಡಿಯಾಗೆ ದೊಡ್ಡ ತಲೆನೋವಾಗಿದೆ. ಎಷ್ಟೇ ದೊಡ್ಡ ಮೊತ್ತವಾದರೂ ಆತ್ಮವಿಶ್ವಾಸದಿಂದ ಬೆನ್ನತ್ತುವ ಕಾರಣಕ್ಕೆ ಟೀಂ ಇಂಡಿಯಾಗೆ ದೊಡ್ಡ ಮೊತ್ತ ಕಲೆ ಹಾಕುವ