ವಿಶಾಖಪಟ್ಟಣ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಸೋಲಲಿದ್ದ ಪಂದ್ಯವನ್ನು ಟೈ ಮಾಡಿಕೊಳ್ಳಲು ಟೀಂ ಇಂಡಿಯಾ ಯಶಸ್ವಿಯಾಗಿದೆ.ಮೊದಲು ಬ್ಯಾಟ್ ಮಾಡಿದ್ದ ಟೀಂ ಇಂಡಿಯಾ ಎದುರಾಳಿಗೆ ಗೆಲ್ಲಲು 322 ರನ್ ನೀಡಿತ್ತು. ಇದು ಒಂದು ಪೈಪೋಟಿಯು ಮೊತ್ತವೇ ಆಗಿತ್ತು. ಆದರೆ ಮೊದಲ ಪಂದ್ಯದ ಹೀರೋ ಶಿಮ್ರೋನ್ ಹೆಟ್ ಮೇರ್ ಮತ್ತೆ ಸ್ಪೋಟಕ ಬ್ಯಾಟಿಂಗ್ ನಡೆಸಿ ವಿಂಡೀಸ್ ಗೆಲುವಿನ ಗುರಿ ಸುಲಭವಾಗಿಸಿದರು. ಒಂದು ಹಂತದಲ್ಲಿ ವಿಂಡೀಸ್ 45 ಓವರ್