ವಿಶಾಖಪಟ್ಟಣ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ದ್ವಿತೀಯ ಏಕದಿನ ಪಂದ್ಯ ಇಂದು ವಿಶಾಖಪಟ್ಟಣದಲ್ಲಿ ನಡೆಯಲಿದ್ದು, ಮತ್ತೊಂದು ರನ್ ಮಳೆ ನಿರೀಕ್ಷಿಸಲಾಗಿದೆ.ವಿಶಾಖಪಟ್ಟಣ ಕೂಡಾ ಬ್ಯಾಟಿಂಗ್ ಗೆ ಹೇಳಿ ಮಾಡಿಸಿದ ಪಿಚ್. ಭಾರತದ ಅಗ್ರ ಬ್ಯಾಟ್ಸ್ ಮನ್ ಗಳ ಸದ್ಯದ ಫಾರ್ಮ್ ನೋಡಿದರೆ ಮತ್ತೊಂದು ರನ್ ಮಳೆ ಗ್ಯಾರಂಟಿ ಎಂಬಂತಾಗಿದೆ.ಇತ್ತ ವಿಂಡೀಸ್ ನಲ್ಲೂ ಬ್ಯಾಟಿಂಗ್ ನಲ್ಲಿ ಸುಧಾರಿತ ಪ್ರದರ್ಶನ ಕಂಡುಬಂದಿದೆ. ಹೀಗಾಗಿ ಭಾರತ ಬೌಲರ್ ಗಳನ್ನು ಆಯ್ಕೆ ಮಾಡುವಾಗ ಎಚ್ಚರಿಕೆ ವಹಿಸಬೇಕಿದೆ.