ಇಂದೋರ್`ನಲ್ಲಿ ಆಸ್ಟ್ರೇಲಿಯಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ 5 ವಿಕೆಟ್`ಗಳಿಂದ ಜಯ ಗಳಿಸುವ ಮೂಲಕ ಭಾರತ ತಂಡ 5 ಪಂದ್ಯಗಳ ಏಕದಿನ ಸರಣಿಯನ್ನ 3-0 ಅಂತರದಿಂದ ಕೈವಶ ಮಾಡಿಕೊಂಡಿದೆ. 5 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ತಂಡ ಹ್ಯಾಟ್ರಿಕ್ ವಿಜಯದ ಮೂಲಕ ಸರಣಿ ಗೆದ್ದುಕೊಂಡಿದ್ದು, ಉಳಿದೆರಡು ಪಂದ್ಯಗಳು ಔಪಚಾರಿಕವಾಗಲಿವೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ ನಿಗದಿತ 50 ಓವರ್`ಗಳಲ್ಲಿ ಆರೋನ್ ಫಿಂಚ್ ಅವರ ಶತಕ(124)ದ ನೆರವಿನಿಂದ