ಆಂಟಿಗ್ವಾ: ಅಂಡರ್ 19 ವಿಶ್ವಕಪ್ ಕೂಟದಲ್ಲಿ ಮತ್ತೊಮ್ಮೆ ಫೈನಲ್ ಗೆದ್ದು ಚಾಂಪಿಯನ್ ಎನಿಸಿಕೊಳ್ಳುವ ಉತ್ಸಾಹದಲ್ಲಿ ಇಂದು ಭಾರತ ತಂಡ ಇಂಗ್ಲೆಂಡ್ ನ್ನು ಎದುರಿಸಲಿದೆ.ವೆಸ್ಟ್ ಇಂಡೀಸ್ ನಲ್ಲಿ ನಡೆಯುತ್ತಿರುವ ಕೂಟದಲ್ಲಿ ಯಶ್ ಧುಲ್ ನೇತೃತ್ವದ ಭಾರತ ತಂಡ ಇದುವರೆಗೆ ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಮಿಂಚಿ ಅದ್ಭುತ ಪ್ರದರ್ಶನ ನೀಡಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಗೆಲ್ಲುವ ಫೇವರಿಟ್ ಎನಿಸಿಕೊಂಡಿದೆ.ಅತ್ತ ಇಂಗ್ಲೆಂಡ್ ಗೆ ಮೊದಲ ಬಾರಿಗೆ ಅಂಡರ್ 19 ವಿಶ್ವಕಪ್ ಗೆಲ್ಲುವ ಕನಸು.