ಇಂಧೋರ್: ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಎರಡನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ.ಈ ಪಂದ್ಯಕ್ಕೆ ನಿರೀಕ್ಷೆಯಂತೇ ವಿರಾಟ್ ಕೊಹ್ಲಿ ಕಮ್ ಬ್ಯಾಕ್ ಮಾಡಿದ್ದಾರೆ. ಅವರ ಬದಲಿಗೆ ತಿಲಕ್ ವರ್ಮ ಸ್ಥಾನ ತ್ಯಾಗ ಮಾಡಿದ್ದಾರೆ. ಯಶಸ್ವಿ ಜೈಸ್ವಾಲ್ ಗೆ ಅವಕಾಶ ನೀಡಲಾಗಿದ್ದು ಶುಬ್ಮನ್ ಗಿಲ್ ರನ್ನು ಹೊರಗಿಡಲಾಗಿದೆ. ವಿಶ್ವಕಪ್ ನ್ನು ಗಮನದಲ್ಲಿಟ್ಟುಕೊಂಡು ತಂಡದ ಆಯ್ಕೆ ಮಾಡುತ್ತಿರುವುದಾಗಿ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ. ಉಳಿದಂತೆ ಕಳೆದ ಪಂದ್ಯದಲ್ಲಿ ಆಡಿದ ತಂಡದಲ್ಲಿ ಯಾವುದೇ ಬದಲಾವಣೆಯಿಲ್ಲ.