ಕೇಪ್ ಟೌನ್: ಭಾರತದ ವಿರುದ್ಧ ನಾಳೆ ಆರಂಭವಾಗಲಿರುವ ಎರಡನೇ ಟೆಸ್ಟ್ ಪಂದ್ಯಕ್ಕೆ ದ.ಆಫ್ರಿಕಾ ಗ್ರೀನ್ ಪಿಚ್ ಸಿದ್ಧಪಡಿಸಿದ್ದು, ಮತ್ತೆ ಬೌನ್ಸ್ ಆಗುವ ನಿರೀಕ್ಷೆಯಿದೆ. ಇದು ಮತ್ತೆ ಭಾರತಕ್ಕೆ ಭಯ ಹುಟ್ಟಿಸಿದೆ.ಮೊದಲ ಟೆಸ್ಟ್ ಸೆಂಚೂರಿಯನ್ ನಲ್ಲಿ ನಡೆದಿತ್ತು. ಈ ಪಂದ್ಯದಲ್ಲಿ ಟಾಸ್ ಸೋತ ಭಾರತ ಮೊದಲು ಬ್ಯಾಟಿಂಗ್ ಮಾಡಿತ್ತು. ವೇಗಿಗಳ ದಾಳಿಗೆ ಭಾರತದ ಬ್ಯಾಟಿಂಗ್ ಸಂಪೂರ್ಣ ಹಳಿತಪ್ಪಿತ್ತು.ಇದೀಗ ಎರಡನೇ ಟೆಸ್ಟ್ ಗೆಲ್ಲಲೇಬೇಕಾದ ಒತ್ತಡದಲ್ಲಿರುವ ಟೀಂ ಇಂಡಿಯಾಗೆ ವೇಗದ ಪಿಚ್ ಭಯ ಹುಟ್ಟಿಸಿದೆ.