ಯುಎಇಯಲ್ಲಿ ಐಪಿಎಲ್ 13: ಬಿಸಿಸಿಐ ಸಭೆಯಲ್ಲಿ ಮಹತ್ವದ ನಿರ್ಧಾರ

ಮುಂಬೈ| Krishnaveni K| Last Modified ಶನಿವಾರ, 18 ಜುಲೈ 2020 (10:32 IST)
ಮುಂಬೈ: ಈ ಬಾರಿ ಕೊರೋನಾದಿಂದಾಗಿ ನಿಗದಿತ ಸಮಯಕ್ಕೆ ಆಯೋಜಿಸಲು ಸಾಧ‍್ಯವಾಗದ ಕಾರಣ ಇದೀಗ ಅಕ್ಟೋಬರ್ ವೇಳೆಗೆ ಯುಎಇನಲ್ಲಿ ನಡೆಸಲು ತೀರ್ಮಾನಿಸಿದೆ ಎನ್ನಲಾಗಿದೆ.

 
ನಿನ್ನೆ ನಡೆದ ಬಿಸಿಸಿಐ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಮಾಡಲಾಗಿದ್ದು, ಇದೀಗ ಕೇಂದ್ರ ಸರ್ಕಾರದ ಮುಂದೆ ಪ್ರಸ್ತಾಪವಿಟ್ಟಿದ್ದು, ಒಪ್ಪಿಗೆಗಾಗಿ ಕಾಯುತ್ತಿದೆ ಎನ್ನಲಾಗಿದೆ.
 
ಸದ್ಯದ ಪರಿಸ್ಥಿತಿಯಲ್ಲಿ ಭಾರತದಲ್ಲಂತೂ ಐಪಿಎಲ್ ಆಯೋಜಿಸಲು ಸಾಧ‍್ಯವಿಲ್ಲ. ಹೀಗಾಗಿ ಯುಎಇ ದೇಶದಲ್ಲಿ ನಡೆಸಲು ಬಿಸಿಸಿಐ ಚಿಂತನೆ ನಡೆಸಿದೆ. ಕೇಂದ್ರ ಒಪ್ಪಿಗೆ ನೀಡಿದರೆ ಅಕ್ಟೋಬರ್ ನಲ್ಲಿ ಯುಎಇನಲ್ಲಿ ಐಪಿಎಲ್ ನಡೆಯುವುದು ಪಕ್ಕಾ ಆಗಲಿದೆ.
ಇದರಲ್ಲಿ ಇನ್ನಷ್ಟು ಓದಿ :