ಮುಂಬೈ: ಮುಂದಿನ ಐಪಿಎಲ್ ನಲ್ಲಿ ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಹೊಸ ತಂಡ ಸೇರ್ಪಡೆಯಾಗುವುದು ಖಚಿತವಾಗಿದೆ. ಆದರೆ ಅವರು ತವರು ಆರ್ ಸಿಬಿಯನ್ನು ಮರಳಿ ಸೇರುತ್ತಾರಾ ಅಥವಾ ಹೊಸದಾಗಿ ಸೇರ್ಪಡೆಯಾಗಿರುವ ಲಕ್ನೋ ತಂಡಕ್ಕೆ ನಾಯಕರಾಗುತ್ತಾರಾ ಎಂಬ ಚರ್ಚೆ ನಡೆದಿದೆ.ವಿರಾಟ್ ಕೊಹ್ಲಿಯಿಂದ ತೆರವಾದ ಆರ್ ಸಿಬಿ ನಾಯಕತ್ವಕ್ಕೆ ರಾಹುಲ್ ಆಗಮನವಾಗಲಿದೆ ಎಂಬ ಸುದ್ದಿ ಇದಕ್ಕೂ ಮೊದಲು ಓಡಾಡುತ್ತಿತ್ತು.ಆದರೆ ಇದೀಗ ಅವರು ಲಕ್ನೋ ತಂಡದ ನಾಯಕರಾಗಿ ಆಯ್ಕೆಯಾಗಬಹುದು ಎಂಬ ಸುದ್ದಿ ಹರಿದಾಡುತ್ತಿದೆ.