ಮುಂಬೈ: ಐಪಿಎಲ್ 2022 ರ ಮೆಗಾ ಹರಾಜು ಪ್ರಕ್ರಿಯೆ ಎರಡು ದಿನ ನಡೆಯಲಿದ್ದು, ಐಪಿಎಲ್ ಇತಿಹಾಸದಲ್ಲೇ ಇದು ಹೊಸ ದಾಖಲೆಯಾಗಲಿದೆ.ಜನವರಿ ಮೂರನೇ ವಾರ ಅಥವಾ ಫೆಬ್ರವರಿ ಮೊದಲ ವಾರ ಬೆಂಗಳೂರಿನಲ್ಲಿ ಹರಾಜು ಪ್ರಕ್ರಿಯೆ ನಡೆಯುವ ಸಾಧ್ಯತೆಯಿದೆ. ಈ ಮೊದಲು ಜನವರಿ ಮೊದಲ ವಾರದಲ್ಲೇ ಹರಾಜು ಪ್ರಕ್ರಿಯೆ ನಡೆಯಲಿದೆ ಎಂಬ ಮಾತುಗಳಿತ್ತು.ಆದರೆ ಇದೀಗ ಹರಾಜು ಪ್ರಕ್ರಿಯೆ ಮುಂದೂಡಿಕೆಯಾಗಿದೆ. ಕಳೆದ ಬಾರಿ ಮಾತ್ರ ಬೆಂಗಳೂರಿನ ಹೊರತಾಗಿ ಬೇರೊಂದು ಸ್ಥಳದಲ್ಲಿ ಹರಾಜು ಪ್ರಕ್ರಿಯೆ ನಡೆದಿತ್ತು.