ಮುಂಬೈ: ವಿಶ್ವದ ಶ್ರೀಮಂತ ಕ್ರೀಡಾಕೂಟ ಎಂಬ ಖ್ಯಾತಿಯಲ್ಲಿರುವ ಐಪಿಎಲ್ 2022 ಕ್ಕೆ ಇಂದು ಅಧಿಕೃತ ಚಾಲನೆ ಸಿಗಲಿದೆ.ಮೊದಲ ಪಂದ್ಯದಲ್ಲಿ ಇಂದು ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕೊತ್ತಾ ನೈಟ್ ರೈಡರ್ಸ್ ಸೆಣಸಾಟ ನಡೆಸಲಿವೆ. ಈ ಕೂಟದಲ್ಲಿ ಸಿಎಸ್ ಕೆಗೆ ರವೀಂದ್ರ ಜಡೇಜಾ ನೇತೃತ್ವ ವಹಿಸಲಿದ್ದಾರೆ. ನಾಯಕರಾಗಿ ಅವರಿಗೆ ಇದು ಮೊದಲ ಅನುಭವ. ಜೊತೆಗೆ ಧೋನಿ ಉತ್ತರಾಧಿಕಾರಿಯಾಗಿ ತಂಡದ ಯಶಸ್ಸು ಮುಂದುವರಿಸುವ ಜವಾಬ್ಧಾರಿ ಅವರ ಮೇಲಿದೆ.ಅತ್ತ ಕೆಕೆಆರ್ ಕಳೆದ