ಮುಂಬೈ: ಐಪಿಎಲ್ ನಲ್ಲಿ ಕಳೆದ ಎರಡು ಸೀಸನ್ ಗಳಿಂದ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ ಮುಂಬೈ ಇಂಡಿಯನ್ಸ್ ತಂಡ ಪ್ರತಿನಿಧಿಸುತ್ತಿದ್ದಾರೆ.ಆದರೆ ಇದುವರೆಗೆ ಅರ್ಜುನ್ ಗೆ ಆಡುವ ಬಳಗದಲ್ಲಿ ಅವಕಾಶ ಸಿಕ್ಕಿಲ್ಲ. ಕೇವಲ ನೆಟ್ ಬೌಲರ್ ಆಗಿ ಮಾತ್ರ ಬಳಕೆಯಾಗುತ್ತಿದ್ದಾರೆ. ಕಳೆದ ಸೀಸನ್ ನಲ್ಲಿಯೇ ಅರ್ಜುನ್ ಗೆ ಅವಕಾಶ ನೀಡಬೇಕೆಂಬ ಕೂಗು ಕೇಳಿಬಂದಿತ್ತು. ಆದರೆ ಸಿಕ್ಕಿರಲಿಲ್ಲ.ಈ ಬಾರಿಯೂ ಎರಡು ಪಂದ್ಯಗಳಲ್ಲಿ ಅವಕಾಶ ಸಿಕ್ಕಿಲ್ಲ. ಹೀಗಾಗಿ ನೆಟ್ಟಿಗರು ಮುಂಬೈ ಇಂಡಿಯನ್ ತಂಡವನ್ನು