ಚೆನ್ನೈ: ಐಪಿಎಲ್ 2023 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಇಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮಹತ್ವದ ಪಂದ್ಯವಾಡಲಿದೆ.ಲೀಗ್ ಪಂದ್ಯಗಳಲ್ಲಿ ನಿರ್ಣಾಯಕ ಘಟ್ಟ ಇದಾಗಿದೆ. ಹೀಗಾಗಿ ಚೆನ್ನೈಗೆ ಗೆಲುವು ಅನಿವಾರ್ಯ. ಇದುವರೆಗೆ ಆಡಿದ 11 ಪಂದ್ಯಗಳಿಂದ ಚೆನ್ನೈ 7 ಗೆಲುವು ಸಂಪಾದಿಸಿದೆ. ಗೆದ್ದರೆ ಎರಡನೇ ಸ್ಥಾನ ಖಚಿತವಾಗಲಿದೆ.ಅತ್ತ ಡೆಲ್ಲಿ ಕ್ಯಾಪಿಟಲ್ಸ್ ಸತತ ಸೋಲುಗಳ ನಂತರ ಇದೀಗ ಎರಡು ಗೆಲುವು ಸಂಪಾದಿಸಿದ್ದು, ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಈ ಪಂದ್ಯ ಗೆದ್ದರೆ ಹ್ಯಾಟ್ರಿಕ್ ಗೆಲುವು