ಕೋಲ್ಕೊತ್ತಾ: ಐಪಿಎಲ್ 2023 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಾಬಲ್ಯ ಮುಂದುವರಿದಿದೆ. ಕೆಕೆಆರ್ ತಂಡವನ್ನು 49 ರನ್ ಗಳಿಂದ ಮಣಿಸಿದ ಸಿಎಸ್ ಕೆ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ.ಮೊದಲು ಬ್ಯಾಟಿಂಗ್ ಮಾಡಿದ ಧೋನಿ ಪಡೆ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 235 ರನ್ ಗಳಿಸಿತು. ಋತುರಾಜ್ ಗಾಯಕ್ ವಾಡ್ 35, ಡೆವನ್ ಕಾನ್ವೇ 56, ಅಜಿಂಕ್ಯಾ ರೆಹಾನೆ ಅಜೇಯ 71, ಶಿವಂ ದುಬೆ 50 ರನ್ ಗಳಿಸಿದರು.