Photo Courtesy: Twitterಅಹಮ್ಮದಾಬಾದ್: ಐಪಿಎಲ್ 2023 ರ ಫೈನಲ್ ಪಂದ್ಯ ಅಹಮ್ಮದಾಬಾದ್ ನ ನರೇಂದ್ರ ಮೋದಿ ಮೈದಾನದಲ್ಲಿ ನಡೆಯುತ್ತಿದ್ದು, ಮಳೆ ಅಡ್ಡಿಯಾಗಿದೆ.ಇದರಿಂದಾಗಿ ಟಾಸ್ ತಡವಾಗಿದೆ. ಮಳೆ ಇನ್ನೂ ನಿಂತಿಲ್ಲ. ಹನಿಯಾಗಿ ಬರುತ್ತಿರುವುದು ಕ್ರಿಕೆಟ್ ಪ್ರಿಯರಿಗೆ ನಿರಾಸೆ ತಂದಿದೆ. ಒಂದು ವೇಳೆ 9.30 ರೊಳಗೆ ಪಂದ್ಯ ಆರಂಭವಾಗದೇ ಇದ್ದರೆ ಓವರ್ ಕಡಿತವಾಗಬಹುದು.ಕನಿಷ್ಠ 5 ಓವರ್ ಗಳ ಪಂದ್ಯ ನಡೆದರೂ ಫಲಿತಾಂಶ ನಿರೀಕ್ಷಿಸಬಹುದಾಗಿದೆ. ಅಥವಾ ಸೂಪರ್ ಓವರ್ ಮೂಲಕ ಪಂದ್ಯದ ಫಲಿತಾಂಶ ನಿರ್ಧರಿಸಬಹುದು.