ಅಹಮ್ಮದಾಬಾದ್: ಐಪಿಎಲ್ 2023 ರಲ್ಲಿ ಸೋಲಿಲ್ಲದೇ ಮೆರೆದಾಡುತ್ತಿರುವ ಹಾಲಿ ಚಾಂಪಿಯನ್ಸ್ ಗುಜರಾತ್ ಟೈಟನ್ಸ್ ಗೆ ಇಂದು ಕೋಲ್ಕೊತ್ತಾ ನೈಟ್ ರೈಡರ್ಸ್ ಎದುರಾಳಿಯಾಗಿದೆ.ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಇದುವರೆಗೆ ನಡೆದ ಎಲ್ಲಾ ಪಂದ್ಯಗಳಲ್ಲಿ ಬ್ಯಾಟಿಂಗ್, ಬೌಲಿಂಗ್ ಎರಡರಲ್ಲೂ ಮಿಂಚಿದೆ. ಅನುಭವಿ-ಯುವ ಆಟಗಾರರ ಮಿಶ್ರಣವಾಗಿರುವ ಗುಜರಾತ್ ಈ ಕೂಟದ ಪ್ರಬಲ ಸ್ಪರ್ಧಿ.ಇತ್ತ ಕೆಕೆಆರ್ ಮೊದಲ ಪಂದ್ಯದಲ್ಲಿ ಸೋತರೂ ಎರಡನೇ ಪಂದ್ಯದಲ್ಲಿ ಭರ್ಜರಿ ಕಮ್ ಬ್ಯಾಕ್ ಮಾಡಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮಿಂಚಿದೆ.