Photo Courtesy: Twitterಮುಂಬೈ: ಐಪಿಎಲ್ 2023 ಇನ್ನೇನು ಮುಕ್ತಾಯದ ಹಂತಕ್ಕೆ ಬಂದಿದೆ. ಸಿಎಸ್ ಕೆ ಫೈನಲ್ ತಲುಪಿದ್ದು ಇನ್ನೊಂದು ತಂಡ ಯಾವುದು ಎಂದು ನಾಳೆ ತೀರ್ಮಾನವಾಗಲಿದೆ.ಈ ಐಪಿಎಲ್ ನಲ್ಲಿ ಹಲವು ಹೊಸ ಪ್ರತಿಭೆಗಳು ಬೆಳಕಿಗೆ ಬಂದಿವೆ. ಹಲವರು ಹಲವು ದಾಖಲೆಗಳನ್ನು ಮಾಡಿ ಮಿಂಚಿದ್ದಾರೆ. ಈ ಬಾರಿಯ ಐಪಿಎಲ್ ನಲ್ಲಿ ಗರಿಷ್ಠ ರನ್ ಗಳಿಸಿ ಆರೆಂಜ್ ಕ್ಯಾಪ್ ಪಡೆದ ಗೌರವ ಸದ್ಯಕ್ಕೆ ಆರ್ ಸಿಬಿ ಕ್ಯಾಪ್ಟನ್ ಫಾ ಡು ಪ್ಲೆಸಿಸ್ ಅವರದ್ದು.