ಅಹಮ್ಮದಾಬಾದ್: ಐಪಿಎಲ್ 2023 ರಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಕ್ವಾಲಿಫೈಯರ್ ಪಂದ್ಯದಲ್ಲಿ ರೋಹಿತ್ ಶರ್ಮಾ, ಇಶಾನ್ ಕಿಶನ್ ಗಾಯಗೊಂಡಿದ್ದಾರೆ.ಫೀಲ್ಡಿಂಗ್ ಮಾಡುತ್ತಿದ್ದಾಗ ರೋಹಿತ್ ಶರ್ಮಾ ಬಾಲ್ ತಡೆಯಲು ಹೋಗಿ ಕೈ ಬೆರಳಿಗೆ ಗಾಯಮಾಡಿಕೊಂಡರು. ಹೀಗಾಗಿ ಕೊನೆಯ ಎರಡು ಓವರ್ ಗಳನ್ನು ಸೂರ್ಯಕುಮಾರ್ ಯಾದವ್ ನಾಯಕತ್ವ ವಹಿಸಿಕೊಂಡರು. ಆದರೆ ಬಳಿಕ ಬ್ಯಾಟಿಂಗ್ ಮಾಡಲಿಳಿದರು.ರೋಹಿತ್ ಜೊತೆಗೆ ಇಶಾನ್ ಕಿಶನ್ ಕೂಡಾ ಗಾಯಗೊಂಡಿದ್ದರು. ವಿಕೆಟ್ ಕೀಪಿಂಗ್ ಮಾಡುವಾಗ ಇಶಾನ್ ಕಿಶನ್ ಮುಖಕ್ಕೆ ಗಾಯಗೊಂಡರು.