ಮುಂಬೈ: ಐಪಿಎಲ್ 2024 ರ ಹರಾಜಿನಲ್ಲಿ ಆಸ್ಟ್ರೇಲಿಯಾ ಮೂಲದ ವೇಗಿಯನ್ನು ಕೆಕೆಆರ್ ತಂಡ ದಾಖಲೆಯ 24.75 ಕೋಟಿ ರೂ.ಗೆ ಖರೀದಿಸಿದ ವಿಚಾರ ಈಗ ಭಾರೀ ಚರ್ಚೆಯಾಗುತ್ತಿದೆ.ಎಂಟು ವರ್ಷಗಳಿಂದ ಐಪಿಎಲ್ ಆಡದ ವಿದೇಶೀ ವೇಗಿಗೆ ಇಷ್ಟೊಂದು ಬೇಡಿಕೆ ಎಂದಾದರೆ ವಿರಾಟ್ ಕೊಹ್ಲಿಯಂತಹ ಸ್ಟಾರ್ ಆಟಗಾರರು ಎಷ್ಟು ಸಂಭಾವನೆ ಪಡೆಯಬೇಕು ಎಂದು ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಪ್ರಶ್ನಿಸಿದ್ದರು.ಅನಿಲ್ ಕುಂಬ್ಳೆ ಬೆನ್ನಲ್ಲೇ ಮತ್ತೊಬ್ಬ ಭಾರತದ ಮಾಜಿ ಆಟಗಾರ ಆಕಾಶ್ ಚೋಪ್ರಾ ಕೂಡಾ ಇದೇ