ಮುಂಬೈ: ಐಪಿಎಲ್ 2024 ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ಬದಲಾವಣೆ ಬಗ್ಗೆ ಈಗ ಭಾರೀ ಊಹಾಪೋಹಗಳು ಕೇಳಿಬರುತ್ತಿವೆ.ಹಾರ್ದಿಕ್ ಪಾಂಡ್ಯರನ್ನು ಗುಜರಾತ್ ಟೈಟನ್ಸ್ ರಿಲೀಸ್ ಮಾಡಲಿದೆ. ಅವರು ಮತ್ತೆ ತಮ್ಮ ಹಳೆಯ ಫ್ರಾಂಚೈಸಿ ಮುಂಬೈ ಇಂಡಿಯನ್ಸ್ ಕೂಡಿಕೊಳ್ಳಲಿದ್ದಾರೆ ಎಂಬ ಸುದ್ದಿಯಿದೆ. ಹೀಗಾದಲ್ಲಿ ಅವರನ್ನೇ ಮುಂಬೈ ನಾಯಕರಾಗಿ ಮಾಡಲಿದೆ. ರೋಹಿತ್ ಶರ್ಮಾರನ್ನು ಮುಂಬೈ ರಿಲೀಸ್ ಮಾಡಲಿದೆ ಎಂಬ ಸುದ್ದಿಯಿದೆ.ರೋಹಿತ್ ಶರ್ಮಾ ಈ ಮೊದಲು ಗುಜರಾತ್ ಟೈಟನ್ಸ್ ತಂಡ ಸೇರಿಕೊಳ್ಳಲಿದ್ದಾರೆ ಎಂಬ ಸುದ್ದಿ