ಐಪಿಎಲ್ ಹರಾಜು: ವಿದೇಶಿಯರಿಗೆ ದುಬಾರಿ ಹಣ ಖರ್ಚು ಮಾಡಿದ ಫ್ರಾಂಚೈಸಿಗಳು

ಕೋಲ್ಕೊತ್ತಾ| Krishnaveni K| Last Modified ಶುಕ್ರವಾರ, 20 ಡಿಸೆಂಬರ್ 2019 (08:47 IST)
ಕೋಲ್ಕೊತ್ತಾ: ಈ ಬಾರಿ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ವಿದೇಶೀ ಆಟಗಾರರನ್ನು ಕೊಳ್ಳಲು ಫ್ರಾಂಚೈಸಿಗಳು ಹೆಚ್ಚು ಖರ್ಚು ಮಾಡಿದ್ದು, ದೇಶೀಯ ಆಟಗಾರರನ್ನು ಕೇಳುವವರೇ ಇಲ್ಲವಾಗಿದೆ.

 
ಕೋಲ್ಕೊತ್ತಾ ನೈಟ್ ರೈಡರ್ಸ್ ಆಸ್ಟ್ರೇಲಿಯಾದ ಪ್ಯಾಟ್ ಕ್ಯುಮಿನ್ಸ್ ರನ್ನು 15.5 ಕೋಟಿ ರೂ. ಕೊಟ್ಟು ಖರೀದಿ ಮಾಡಿದೆ. ಇವರೇ ಈ ಆವೃತ್ತಿಯ ಶ್ರೀಮಂತ ಆಟಗಾರ. ಕಿಂಗ್ಸ್ ಇಲೆವೆನ್ ಪಂಜಾಬ್ ಗ್ಲೆನ್ ಮ್ಯಾಕ್ಸ್ ವೆಲ್ ರನ್ನು 10.75 ಕೋಟಿ ರೂ.ಗೆ ಪಡೆದುಕೊಂಡಿದೆ.
 
ಇನ್ನು, ವಿಂಡೀಸ್ ನ ಹೊಡೆಬಡಿಯ ಆಟಗಾರ ಶಿಮ್ರಾನ್ ಹೆಟ್ ಮ್ಯಾರ್ ನಿರೀಕ್ಷೆಯಂತೇ ದುಬಾರಿ ಮೊತ್ತಕ್ಕೆ ಬಿಕರಿಯಾಗಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಅವರನ್ನು 7.75 ಕೋಟಿ ರೂ.ಗೆ ಖರೀದಿ ಮಾಡಿದೆ. ಆರ್ ಸಿಬಿ ಕ್ರಿಸ್ ಮಾರಿಸ್ ರನ್ನು 10 ಕೋಟಿ ರೂ.ಗೆ ಖರೀದಿ ಮಾಡಿದೆ.
 
ಮುಂಬೈ ಇಂಡಿಯನ್ಸ್ ನಥನ್ ಕೋಲ್ಟರ್ ನೀಲ್ ರನ್ನು 8 ಕೋಟಿ ರೂ.ಗೆ ಖರೀದಿಸಿದೆ. ರಾಜಸ್ಥಾನ್ ರಾಯಲ್ಸ್ ರಾಬಿನ್ ಉತ್ತಪ್ಪ, ಜೈದೇವ್‍ ಉನಾದ್ಕಟ್ ರನ್ನು ತಲಾ 3 ಕೋಟಿ ರೂ.ಗೆ ಪಡೆದುಕೊಂಡಿದೆ. ಇನ್ನು ಸಿಎಸ್ ಕೆ ಪರ ದುಬಾರಿ ಮೊತ್ತ ಪಡೆದವರು ಪಿಯೂಷ್ ಚಾವ್ಲಾ. 6.75 ಕೋಟಿ ರೂ.ಗೆ ಅವರು ಧೋನಿ ತಂಡದ ಪಾಲಾಗಿದ್ದಾರೆ. ಆದರೆ ದುಬಾರಿ ಮೊತ್ತ ಪಡೆದವರೆಲ್ಲಾ ವಿದೇಶೀ ಆಟಗಾರರೇ ಎಂಬುದು ವಿಶೇಷ.
ಇದರಲ್ಲಿ ಇನ್ನಷ್ಟು ಓದಿ :