ಐಪಿಎಲ್ ಹರಾಜು: ಯುವರಾಜ್, ರಾಬಿನ್ ಉತ್ತಪ್ಪರನ್ನು ಕೈ ಬಿಟ್ಟ ಫ್ರಾಂಚೈಸಿಗಳು

ಮುಂಬೈ, ಶನಿವಾರ, 16 ನವೆಂಬರ್ 2019 (09:07 IST)

ಮುಂಬೈ: ಈ ವರ್ಷದ ಐಪಿಎಲ್ ಹರಾಜು ಪ್ರಕ್ರಿಯೆಗೆ ಮೊದಲು ಆಯಾ ಫ್ರಾಂಚೈಸಿಗಳು ಕೆಲವು ಆಟಗಾರರನ್ನು ತಂಡದಿಂದ ಕೈ ಬಿಟ್ಟಿದ್ದು, ಮತ್ತೆ ಈ ಆಟಗಾರರು ಹರಾಜು ಪ್ರಕ್ರಿಯೆಗೊಳಪಡಲಿದ್ದಾರೆ.

 


ಇವರಲ್ಲಿ ಪ್ರಮುಖರೆಂದರೆ ಮುಂಬೈ ಇಂಡಿಯನ್ಸ್ ನ ಯುವರಾಜ್ ಸಿಂಗ್, ಕೋಲ್ಕೊತ್ತಾ ನೈಟ್ ರೈಡರ್ಸ್ ನ ರಾಬಿನ್ ಉತ್ತಪ್ಪ, ರಾಜಸ್ಥಾನ್ ರಾಯಲ್ಸ್ ನ ಜಯದೇವ್ ಉನಾದ್ಕಟ್ ಮತ್ತಿತರರು. 35 ವಿದೇಶೀ ಆಟಗಾರರನ್ನೊಳಗೊಂಡಂತೆ ಒಟ್ಟು 127 ಆಟಗಾರರನ್ನು ಆಯಾ ಫ‍್ರಾಂಚೈಸಿಗಳು ಮತ್ತೆ ಹರಾಜು ಪ್ರಕ್ರಿಯೆಗೆ ಒಳಪಡಲು ಬಿಟ್ಟಿದೆ.
 
ಡಿಸೆಂಬರ್ 19 ರಂದು ಕೋಲ್ಕೊತ್ತಾದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದ್ದು, ಆ ವೇಳೆ ಈ ಆಟಗಾರರನ್ನು ಯಾವ ಫ್ರಾಂಚೈಸಿಗಳು ಕೊಳ್ಳಲಿವೆ ಎಂದು ನೋಡಬೇಕಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ಬಿಟ್ಟು ಉಳಿದೆಲ್ಲಾ ತಂಡಗಳು ತಮ್ಮ ನಾಯಕನನ್ನು ಉಳಿಸಿಕೊಂಡಿವೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಅನಿಲ್ ಕುಂಬ್ಳೆ ಕನ್ನಡ ಕವನ ವಾಚನಕ್ಕೆ ಫಿದಾ ಆದ ಕನ್ನಡಿಗರು

ಬೆಂಗಳೂರು: ಸ್ಪಿನ್ ಮೋಡಿಗಾರ ಅನಿಲ್ ಕುಂಬ್ಳೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಷ್ಟೇ ಹೆಸರು ಮಾಡಿದ್ದರೂ ...

news

ಕೊನೆಗೂ ಅಭ್ಯಾಸಕ್ಕಿಳಿದ ಧೋನಿ

ರಾಂಚಿ: ವಿಶ್ವಕಪ್ ನಂತರ ಕ್ರಿಕೆಟ್ ಮೈದಾನದಿಂದ ದೂರವೇ ಉಳಿದಿದ್ದ ಹಿರಿಯ ವಿಕೆಟ್ ಕೀಪರ್ ಧೋನಿ ಮತ್ತೆ ...

news

ಭಾರತ-ಬಾಂಗ್ಲಾ ಟೆಸ್ಟ್: ದ್ವಿಶತಕ ಗಳಿಸಿಯೂ ವಿರಾಟ್ ಕೊಹ್ಲಿ ಕನಸು ಈಡೇರಿಸದ ಮಯಾಂಕ್ ಅಗರ್ವಾಲ್!

ಇಂಧೋರ್: ಅದ್ಭುತ ಫಾರ್ಮ್ ನಲ್ಲಿರುವ ಮಯಾಂಕ್ ಅಗರ್ವಾಲ್ ಐದೇ ಇನಿಂಗ್ಸ್ ಅವಧಿಯಲ್ಲಿ ಮತ್ತೊಂದು ದ್ವಿಶತಕ ...

news

ಭಾರತ-ಬಾಂಗ್ಲಾ ಟೆಸ್ಟ್: ಶತಕದ ಹೊಸ್ತಿಲಲ್ಲಿ ಮಯಾಂಕ್ ಅಗರ್ವಾಲ್

ಇಂಧೋರ್: ತನ್ನ ಭರ್ಜರಿ ಫಾರ್ಮ್ ಮುಂದುವರಿಸಿರುವ ಮಯಾಂಕ್ ಅಗರ್ವಾಲ್ ಭಾರತ ಮತ್ತು ಬಾಂಗ್ಲಾ ನಡುವಿನ ಮೊದಲ ...