ನವದೆಹಲಿ: ಈಗಾಗಲೇ ಟೂರ್ನಿಯಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿರುವ ಗೌತಮ್ ಗಂಭೀರ್ ನೇತೃತ್ವದ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ಕಿಂಗ್ಸ್ ಇಲೆವೆನ್ ಪಂಜಾಬ್ ಇದೀಗ ಐಪಿಎಲ್ ಪಂದ್ಯವಾಡುತ್ತಿದ್ದು, ಹೊಡೆಬಡಿಯ ಆಟಗಾರ ಕ್ರಿಸ್ ಗೇಲ್ ಗೇ ಕೊಕ್ ಕೊಟ್ಟಿದೆ.ಇದಕ್ಕೆ ಕಾರಣ ಗೇಲ್ ಗಾಯಗೊಂಡಿರುವುದು. ಈ ಐಪಿಎಲ್ ಆವೃತ್ತಿಯಲ್ಲಿ ಮೊದಲ ಶತಕ ಗಳಿಸಿದ್ದಲ್ಲದೆ, ಭರ್ಜರಿ ಫಾರ್ಮ್ ನಲ್ಲಿರುವ ಗೇಲ್ ಗಾಯಗೊಂಡಿರುವುದು ಪಂಜಾಬ್ ಪಾಳಯದಲ್ಲಿ ಆತಂಕ ಸೃಷ್ಟಿಸಿದೆ.ಅವರ ಗಾಯ ಗಂಭೀರವಲ್ಲದಿದ್ದರೂ ಒಂದು ಪಂದ್ಯದ ಮಟ್ಟಿಗಾದರೂ ವಿಶ್ರಾಂತಿ