ಮುಂಬೈ: ಇತ್ತೀಚೆಗಿನ ದಿನಗಳಲ್ಲಿ ಟೀಂ ಇಂಡಿಯಾ ಟೆಸ್ಟ್ ಫಾರ್ಮ್ಯಾಟ್ ಗಿಂತ ಸೀಮಿತ ಓವರ್ ಗಳ ಪಂದ್ಯಗಳಲ್ಲಿ ಹೆಚ್ಚು ಯಶಸ್ಸು ಕಾಣುತ್ತಿದೆ. ಇದಕ್ಕೆ ಕಾರಣ ಐಪಿಎಲ್ ಎಂದು ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಮೈಕಲ್ ವಾನ್ ಇತ್ತೀಚೆಗೆ ಹೇಳಿದ್ದರು.ಅವರು ಹೇಳಿದ್ದಕ್ಕೆ ಕಾರಣವೂ ಇದೆ. ಭಾರತ ತಂಡಕ್ಕೆ ಇತ್ತೀಚೆಗೆ ಸೇರ್ಪಡೆಯಾದವರೆಲ್ಲಾ ಐಪಿಎಲ್ ಪ್ರತಿಭೆಗಳು. ಇವರೆಲ್ಲಾ ಸೀಮಿತ ಓವರ್ ಗಳ ಪರಿಣಿತ ಆಟಗಾರರು. ಹೀಗಾಗಿ ಕಿರು ಮಾದರಿಯಲ್ಲಿ ಭಾರತ ತಂಡಕ್ಕೆ ಒಬ್ಬ ಪ್ರಮುಖ ಆಟಗಾರ ಅಲಭ್ಯರಾದರೂ